Go to Top

ಪಟೆಲ್ಲ ಸಪೋರ್ಟ್ ಇರುವ ಮಂಡಿಚಿಪ್ಪಿನ ಪಟ್ಟಿ – ಡೈನ ಜೆನು ಆರ್ಥೋ

Knee Brace with Patella Support

ಪಟೆಲ್ಲಾ ಸಪೋರ್ಟ್ ಹೊಂದಿರುವ ಡೈನ ಜೆನು ಆರ್ಥೋ ಮೊಣಕಾಲು ಪಟ್ಟಿಯು ಎಲ್ಲ ಕಡೆಯಲ್ಲೂ ಹೊಂದಾಣಿಕೆಯಾಗಬಲ್ಲ ಶ್ರೇಷ್ಟ ದರ್ಜೆಯ ಸಾಧನವಾಗಿದ್ದು ನಿಮ್ಮ ಮೊಣಕಾಲು ಟೊಪ್ಪಿಗೆಯನ್ನು, ಎಲ್ಲಾ ಕಡೆಯಿಂದಲೂ ಸ್ಥಿರವಾಗಿ ನಿಲ್ಲುವಂತೆ, ಸಂಪೂರ್ಣವಾಗಿ ಸುರಕ್ಷಿತವಾಗಿರಿಸುವಂತೆ ವಿನ್ಯಾಸಗೊಂಡಿದೆ.

  • ಇದರ ಮೃದುವಾದ ಮೆತ್ತೆಯು, ಮೊಣಗಂಟಿನ ಸುತ್ತಲೂ ವೃತ್ತಾಕಾರವಾಗಿ ಸುತ್ತುವರೆದು, ಯಾವುದೇ ಭಂಗಿಯಲ್ಲಿಯೂ ಕೂಡ ಮೊಣಕಾಲಿನ ಟೊಪ್ಪಿಗೆಗೆ ದೃಢತೆ ನೀಡುವಂತೆ ರೂಪಿಸಲ್ಪಟ್ಟಿದೆ.
  • ಮಂಡಿ ಚಿಪ್ಪಿಗೆ ಆಧಾರವಿರುವ ಡೈನ ಜೆನು ಆರ್ಥೋ ಮೊಣಕಾಲು ಪಟ್ಟಿಯು, ಎಡ ಮತ್ತು ಬಲ ಮಂಡಿಯ ಭಾಗಗಳಿಗೂ ಬಳಸಲು ಸೂಕ್ತವಾಗುವಂತೆ ಎಲ್ಲರಿಗೂ ಹೊಂದಾಣಿಕೆಯಾಗುವಂತಹ ವಿನ್ಯಾಸವನ್ನು ಹೊಂದಿದೆ.
  • ಇದರಲ್ಲಿ ಒಂದಕ್ಕೊಂದು ಎದಿರಾಗಿರುವ ವೆಲ್ಕ್ರೋ ಪಟ್ಟಿಗಳಿದ್ದು, ನಿಮ್ಮ ಕಾಲಿನಿಂದ ಪಟ್ಟಿಯು ಕೆಳಗೆ ಜಾರದಂತೆ ಹೆಚ್ಚುವರಿ ಒತ್ತಡ ಬೀರುತ್ತದೆ.
  • ಇದರ ಕೆಳ ಹಿಡಿಕೆಗಳು ಮೊಣಕಾಲನ್ನು ಸಹಜವಾಗಿ ಅಲುಗಾಡಲು ಬಿಡುತ್ತವೆ.

“ಜೆನು” ಎಂದರೆ ಮಂಡಿ ಎಂತಲೂ, “ ಆರ್ಥೋ’ ಎಂದರೆ ಇದನ್ನು ಸರಿಪಡಿಸುವುದು ಎಂದು ಅರ್ಥ ಹಾಗು ಡೈನ ಜೆನು ಆರ್ಥೋ ಮೊಣಕಾಲು ಬಿಗಿ ಪಟ್ಟಿಯು ( ಬ್ರೇಸ್) ಮಂಡಿಯನ್ನು ಸರಿಯಾದ ಭಂಗಿಯಲ್ಲಿರಿಸಲು ಆದರ್ಶ ಸಾಧನವಾಗಿದೆ.

ಡೈನ ಜೆನು ಆರ್ಥೋ ಮೊಣಕಾಲು ಪಟ್ಟಿಯನ್ನು ಬಳಸಬಹುದಾದಂತಹ ಸಂದರ್ಭಗಳು:

  • ಪಾಟೆಲ್ಲರ್ ಡಿಸ್ಲೊಕೇಷನ್ ಅಥವಾ ಸಬ್ಲಕ್ಷೇಷನ್ ಸಂಭವಿಸಿದಾಗ.
  • ಟೆಂಡೊನೈಟಿಸ್ ಆಗಿದ್ದಲ್ಲಿ
  • ಒ ಎಸ್ ಡಿ ( ಓಸ್ಗುಡ್- ಸ್ಕ್ಲಾಟ್ಟರ್ ಕಾಯಿಲೆ)
  • ಮಂಡಿಚಿಪ್ಪಿನ ಭಾಗದಲ್ಲಿ ಕಾಂಡ್ರೊಮಲೇಸಿಯಾ ಸಂಭವಿಸಿದ್ದರೆ.

ಇದಕ್ಕೆ ಸಂಬಂಧಪಟ್ಟ ಉತ್ಪಾದನೆಗಳು: 

ಸ್ಪೈರಲ್ ಸ್ಟೇಗಳಿರುವ ಮಂಡಿ ಪಟ್ಟಿ(ನೀ ಬ್ರೇಸ್)- ಡೈನ ಜೆನು ಎಂಎಲ್

ಕೆಳ ಹಿಡಿಕೆ ಇರುವ ಮಂಡಿ ಪಟ್ಟಿ ಓಪನ್ ಪಟೆಲ್ಲ – ಡೈನ