skip to Main Content
Domestic: 1-800-102-7902 | Export: +91 89434 34712
+91-7356115555 | Mon-Sat 9am-5pm IST

Varicose Vein Stockings – Comprezon

 

ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಅನ್ನು ವೆರಿಕೋಸ್ ವೆಯಿನ್ಸ್ ನ ಲಕ್ಷಣಗಳು ಮತ್ತು ಬೆಳವಣಿಗೆಯನ್ನು ನಿವಾರಿಸಲು ಬಳಸಲ್ಪಡುತ್ತವೆ.ಕಂಪ್ರೆಷನ್ ಚಿಕಿತ್ಸೆಯು ವೆರಿಕೋಸ್ ವೆಯಿನ್ಸ್ ಗೆ ಅತಿ ಪರಿಣಾಮಕಾರಿಯಾದ,ಶಸ್ತ್ರ ಚಿಕಿತ್ಸೆ ಇಲ್ಲದ ಚಿಕಿತ್ಸಾ ವಿಧಾನವಾಗಿದೆ.

ಉಬ್ಬಿರುವ ರಕ್ತನಾಳಗಳಿಗೆ(ವೆರಿಕೋಸ್ ವೆಯಿನ್ಸ್) ಕಾರಣಗಳು

ಹೃದಯವು ಅಪಧಮನಿಗಳ ಮೂಲಕ ಕಾಲುಗಳಿಗೆ ರಕ್ತವನ್ನು ತುಂಬುತ್ತದೆ. ಆಮ್ಲಜನಕರಹಿತ ರಕ್ತವು ರಕ್ತನಾಳಗಳ ಮೂಲಕ ಮತ್ತೆ ಹೃದಯಕ್ಕೆ ರಕ್ತವನ್ನು ತುಂಬ ಬೇಕಾಗುತ್ತದೆ. ಸಾಮಾನ್ಯವಾಗಿ, ಒಬ್ಬ ಆರೋಗ್ಯಕರ ವ್ಯಕ್ತಿಯಲ್ಲಿ, ಮೀನಖಂಡದ ಸ್ನಾಯುಗಳು ಆಮ್ಲಜನಕರಹಿತ ರಕ್ತವನ್ನು ಮತ್ತೆ ಹೃದಯಕ್ಕೆ ತುಂಬುವಲ್ಲಿ ’ಪಂಪ್’ ನಂತೆ ಕೆಲಸಮಾಡುತ್ತವೆ. ಮೀನಖಂಡದ ಸ್ನಾಯುಗಳ ’ಪಂಪ್’ ನಂತೆ ಕೆಲಸಮಾಡುವ ಪ್ರಕ್ರಿಯೆಯಲ್ಲದೆ, ಗುರುತ್ವಾಕರ್ಷಣೆಗೆ ರಕ್ತವು ಮತ್ತೆ ಹಿಂದೆ ಹರಿಯದಂತೆ ತಡೆಯುವ ಸಲುವಾಗಿ ರಕ್ತನಾಳಗಳು ಮೇಲ್ಮುಖವಾಗಿ ತೆರೆಯಲ್ಪಟ್ಟಿರುವ ಕವಾಟಗಳನ್ನು ಹೊಂದಿರುತ್ತವೆ. ಈ ಕವಾಟಗಳು ದುರ್ಬಲವಾದಲ್ಲಿ, ರಕ್ತವು ಕಾಲಿನ ರಕ್ತನಾಳಗಳಲ್ಲಿ ತುಂಬಿಕೊಂಡು , ’ವೆರಿಕೋಸ್ ವೆಯಿನ್ಸ್’(ಉಬ್ಬಿರುವ ರಕ್ತನಾಳ) ಗಳನ್ನು ಉಂಟುಮಾಡುತ್ತದೆ.

ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಹೇಗೆ ಸಹಕಾರಿಯಾಗುತ್ತದೆ?

ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ರಕ್ತವನ್ನು ಸರಿಯಾದ ರೀತಿಯಲ್ಲಿ ಮತ್ತೆ ಹೃದಯದೆಡೆಗೆ ಹರಿಯುವಂತೆ ಮಾಡಲು, ರಕ್ತನಾಳಗಳನ್ನು ಹಿಂಡಲು (ಇದು ಕವಾಟಗಳು ಸರಿಯಾಗಿ ಮುಚ್ಚಲು ಸಹಾಯಮಾಡುತ್ತದೆ) ಕಾಲಿನ ಮೇಲೆ ನಿಯಮಿತವಾದ ರೀತಿಯಲ್ಲಿ ಒತ್ತಡವನ್ನು ನೀಡುತ್ತದೆ.

ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಕಣಕಾಲಿನ ಮಟ್ಟಕ್ಕೆ ಗರಿಷ್ಟ ಒತ್ತಡವನ್ನು ರಕ್ತನಾಳಗಳ ಮೇಲೆ ಹಾಕುವುದೇ ಅಲ್ಲದೆ, ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಮೊಣಕಾಲು ಮತ್ತು ತೊಡೆಯ ಕಡೆ ಹಿಗ್ಗಿದಂತೆ ನಿಧಾನವಾಗಿ ಕಡಿಮೆ ಒತ್ತಡವನ್ನು ಹಾಕುತ್ತದೆ. ಕ್ರಮೇಣ ಬದಲಾಯಿಸುವ ಒತ್ತಡವುಳ್ಳ ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಕಣಕಾಲಿಗೆ 100%,ಮೀನಖಂಡದ ಸ್ನಾಯುವಿಗೆ 70%, ಮತ್ತು ತೊಡೆಗೆ ೪೦% ಒತ್ತಡವನ್ನು ಹಾಕುತ್ತದೆ. ಈ ಪರಿಣಾಮವಾಗಿ ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ರಕ್ತವನ್ನು, ಸಾಮಾನ್ಯವಾಗಿ ಯಾವುದೇ ದ್ರವವು ಹೆಚ್ಚು ಒತ್ತಡವಿರುವ ಕಡೆಯಿಂದ ಕಡಿಮೆ ಒತ್ತಡ ಇರುವ ಕಡೆ ಹರಿಯುವಂತೆ, ತನ್ನ ಸ್ವಾಭಾವಿಕ ರೀತಿಯಲ್ಲಿಯೇ ಕಾಲಿನಿಂದ ಮೇಲ್ಭಾಗದ ರಕ್ತನಾಳಗಳಿಗೆ ಹರಿಯುವಂತೆ ಮಾಡುತ್ತದೆ.

ಅಳತೆಯ ಆಯ್ಕೆ

ಸರಿಯಾದ ಅಳತೆ, ವಿನ್ಯಾಸ ಮತ್ತು ವರ್ಗದ ಆಯ್ಕೆಯು ವೆರಿಕೋಸ್ ವೆಯಿನ್ಸ್ ನ ಚಿಕಿತ್ಸೆಗೆ ಬಹಳ ಮುಖ್ಯವಾಗಿದೆ. ಕೇವಲ ನಿಮ್ಮ ವೈದ್ಯರು ಮಾತ್ರ ನಿಮಗೆ ತಕ್ಕನಾದ ವಿನ್ಯಾಸ ಹಾಗು ವರ್ಗವನ್ನು ಶಿಫಾರಿಸ್ಸು ಮಾಡಬಲ್ಲರು.

ಅಳತೆಗಳು: ಎಸ್, ಎಂ, ಎಲ್, ಎಕ್ಸೆಲ್, ಎಕ್ಸ್ ಎಕ್ಸೆಲ್, ಎಕ್ಸ್ ಎಕ್ಸೆಲ್

ವಿನ್ಯಾಸಗಳು: ಎಡಿ,ಎ ಯೆಫ್, ಎಜಿ, ಎಟಿ

ಎಡಿ- ಮಂಡಿಯವರೆಗೆ, ಎ ಯೆಫ್- ತೊಡೆಯ ಮಧ್ಯದವರೆಗೆ: ಎಟಿ- ತೊಡೆ ಸಂದಿನವರೆಗೆ

ಕಂಪ್ರೆಜೋನ್ ವರ್ಗಗಳು: ವರ್ಗ 1, ವರ್ಗ 2, ವರ್ಗ 3

ವರ್ಗವು ಸ್ಟಾಕಿಂಗಿನಿಂದ ಹಾಕಲ್ಪಡುವ ಗರಿಷ್ಟ ಒತ್ತಡದ ಸೂಚನೆಯಾಗಿದೆ. ಒತ್ತಡವನ್ನು “ಪಾದರಸದ ಎಂಎಂ ನಲ್ಲಿ” ಅಥವಾ ಎಂಎಂಹೆಚ್ ಜಿ ಯಲ್ಲಿ ಅಳೆಯಲಾಗುತ್ತದೆ.

ವರ್ಗ 1– 18 ರಿಂದ 21 ಎಂಎಂಹೆಚ್ ಜಿ ನಷ್ಟು ಒತ್ತಡವನ್ನು ಕಣಕಾಲಿನ ಮೇಲೆ ಹಾಕುತ್ತದೆ

ವರ್ಗ 2- 23 ರಿಂದ 32 ಎಂಎಂಹೆಚ್ ಜಿ ನಷ್ಟು ಒತ್ತಡವನ್ನು ಕಣಕಾಲಿನ ಮೇಲೆ ಹಾಕುತ್ತದೆ

ವರ್ಗ 3- 32 ರಿಂದ 46 ಎಂಎಂಹೆಚ್ ಜಿ ನಷ್ಟು ಒತ್ತಡವನ್ನು ಕಣಕಾಲಿನ ಮೇಲೆ ಹಾಕುತ್ತದೆ

ಕಂಪ್ರೆಜೋನ್ ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸಿಗೆ ಯಾವ ರೀತಿಯಲ್ಲಿ ಸೂಕ್ತವಾದ ಆಯ್ಕೆಯಾಗಿದೆ?

ವಿಶಿಷ್ಟವಾದ ಯುರೋಪಿಯನ್ ಮಶಿನರಿಯನ್ನು ಬಳಸಿ ಕಂಪ್ರೆಜೋನ್ ಅನ್ನು ತಯಾರಿಸಲಾಗಿದೆ

ನಿಖರವಾದ ಮತ್ತು ನಿಯಮಿತವಾದ ಒತ್ತಡಕ್ಕಾಗಿಯೇ ಕಂಪ್ರೆಜೋನ್ ಅನ್ನು ವಿನ್ಯಾಸಗೊಳಿಸಲಾಗಿದೆ

ಕಂಪ್ರೆಜೋನ್ ಅನ್ನು ಯುರೋಪಿಯನ್ ಗುಣಮಟ್ಟಕ್ಕೆ ಹೊಂದುವಂತೆ ಮಾಡಲಾಗಿದೆ.

ಭಾರತದಲ್ಲಿ ತಯಾರಿಸಲ್ಪಡುವ ಇನ್ನಿತರ “ಸ್ಟಾಕಿಂಗ್ಸ್”ಹೊಲೆದ” ಅಥವಾ “ಟ್ಯೂಬ್ ನಂತಹ ಬಟ್ಟೆಯಾಗಿರುತ್ತವೆ”. ಇವುಗಳು ನಿಖರವಾದ ಮತ್ತು ನಿಯಮಿತವಾದ ಒತ್ತಡವನ್ನು ಕೊಡಲಾರವು.ರಕ್ತವು ಕಾಲಿನಿಂದ ಮೇಲೆ ಹಿಮ್ಮುಖವಾಗಿ ಹರಿಯುವಂತೆ ಮಾಡಲು ನಿಯಮಿತವಾದ ಕಂಪ್ರೆಷನ್ ಅಗತ್ಯವಾಗಿದೆ. ಸರಿಯಲ್ಲದ ಒತ್ತಡದ ಪ್ರವಣತೆಯು ರೋಗಿಯ ಸ್ಥಿತಿಯನ್ನು ಇನ್ನೂ ಹದೆಗೆಡಿಸಬಹುದು.

ಕಂಪ್ರೆಜೋನ್ ಆಮದು ಮಾಡಲಾದ ವಿಶೇಷವಾದ ನೂಲನ್ನು ಗುಣಮಟ್ಟ, ಬಾಳಿಕೆ ಮತ್ತು ಚರ್ಮಕ್ಕೆ ಹಾನಿಯಾಗದಂತಿರಲು ಬಳಸುತ್ತದೆ.

ಇದರಂತೆ ಕಾಣುವ ಬೇರೆಯ ಕಡಿಮೆ ಬೆಲೆಯ ಸ್ಟಾಕಿಂಗ್ಸ್ ನಂತಲ್ಲದ ಕಂಪ್ರೆಜೋನ್ ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಹಲವು ತಿಂಗಳುಗಳ ಬಳಕೆಯ ನಂತರವೂ ಅದರ ಒತ್ತಡದ ಪ್ರವಣಿಕೆಯನ್ನು ಉಳಿಸಿಕೊಳ್ಳುತ್ತದೆ.

ಭಾರತದಾದ್ಯಂತ 2000 ವಿತರಕರ ಬಳಿ ಲಭ್ಯವಿದೆ

ನಿಮಗಿರಬಹುದಾದಂತಹ ಯಾವುದೇ ಪ್ರಶ್ನೆಗಳನ್ನು ಉತ್ತರಿಸಲು ಉತ್ತಮ ತರಬೇತಿ ಹೊಂದಿರುವ ಫೀಲ್ಡ್ ಸಿಬ್ಬಂದಿಗಳು ಭಾರತದಾದ್ಯಂತ ಇದ್ದಾರೆ

ಭಾರತದಲ್ಲಿ, ಕಂಪ್ರೆಜೋನ್ ಅಂತರ ರಾಷ್ಟ್ರೀಯ ಗುಣಮಟ್ಟವನ್ನು ಆಮದು ಮಾಡಲಾದ ಸ್ಟಾಕಿಂಗ್ಸ್ ಗಳ ಬೆಲೆಗಿನ್ನ ಅರ್ಧದಷ್ಟು ಬೆಲೆಯಲ್ಲಿ ನೀಡುತ್ತದೆ. ಇದರಿಂದ ಕಂಪ್ರೆಜೋನ್ ವೆರಿಕೋಸ್ ವೆಯಿನ್ಸ್ ಸ್ಟಾಕಿಂಗ್ಸ್ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ.

40 ಕ್ಕೂ ಹೆಚ್ಚಿನ ದೇಶಗಳಲ್ಲಿ ನಮ್ಮ ವಿತರಕರಿಂದ ಕಂಪ್ರೆಜೋನ್ ಲಭ್ಯವಿದೆ. ನಿಮ್ಮ ದೇಶದ ವಿತರಕರ ಮಾಹಿತಿಗಾಗಿ ನಮಗೆ ಮೇಲ್ ಮಾಡಿ.

ರೂಪಾಂತರಗಳು

ಕಂಪ್ರೆಜೋನ್ 3 ರೂಪಗಳಲ್ಲಿ ಲಭ್ಯವಿದೆ

  • ನೈಲಾನ್ ಉಳ್ಳ ಕಂಪ್ರೆಜೋನ್
  • ಕಂಪ್ರೆಜೋನ್ ಕಾಟನ್. ಹತ್ತಿಯಿಂದ ಮಾಡಲ್ಪಟ್ಟಿದ್ದು ನಿಮ್ಮನ್ನು ಬೇಸಿಗೆಯಲ್ಲೂ ಆರಾಮಾಗಿಡುತ್ತದೆ
  • ಕಂಪ್ರೆಜೋನ್ ಸಿಲ್ವರ್. ಬೆಳ್ಳಿಯ ಸೂಕ್ಷ್ಮಾಣು ನಿರೋಧಕ ಶಕ್ತಿಯು ಸ್ಟಾಕಿಂಗ್ಸನ್ನು ಹೆಚ್ಚಿನ ಸಮಯ ಧರಿಸಿದರೂ ವಾಸನೆ ಬರದಂತೆ ಮಾಡುತ್ತದೆ.

 

ನೀವು ವೆರಿಕೋಸ್ ವೆಯಿನ್ಸ್ ಉಪಯೋಗದ ಬಗೆಗಿನ ವಿಡಿಯೋ ಅನ್ನು ಇಲ್ಲಿ ನೋಡಬಹುದು-

Back To Top