Go to Top

ಪೋಸ್ಟ್ ಮಟರ್ನಿಟಿ ಕಾರ್ಸೆಟ್

Post Maternity Corset

ಪೋಸ್ಟ್ ಮಟರ್ನಿಟಿ ಕಾರ್ಸೆಟ್ಟನ್ನು ನಾನು ಏಕೆ ಬಳಸಬೇಕು?

ಗರ್ಭಧಾರಣೆಯ ಸಮಯದಲ್ಲಿ, ಗರ್ಭಕೋಶದ ಹಿಗ್ಗುವಿಕೆಯು ಕಿಬ್ಬೊಟ್ಟೆಯ ಸ್ನಾಯುಗಳನ್ನು ಎಳೆದು ಹಿಗ್ಗಿಸುತ್ತದೆ. ಬೆಳೆಯುತ್ತಿರುವ ಭ್ರೂಣವನ್ನು ಹೊಂದಿಸಿಕೊಳ್ಳಲು ಸೊಂಟದ ಜಾಗವು ಹಿಗ್ಗುತ್ತದೆ.

ಮಗು ಹುಟ್ಟಿದ ನಂತರ, ಗರ್ಭಕೋಶವು ಅದರ ಮೊದಲಿನ ಪೂರ್ವ-ಗರ್ಭಧಾರಣೆಯ ಆಕಾರಕ್ಕೆ ಮರಳಲು 6 ವಾರಗಳು ಬೇಕಾಗುತ್ತವೆ. ಮಗುವಿನ ಜನನದ ನಂತರ ಕಿಬ್ಬೊಟ್ಟೆಯ ಗೋಡೆಯು ಕೂಡ ಸಡಿಲವಾಗುತ್ತದೆ.

ಪೋಸ್ಟ್ ಮಟರ್ನಿಟಿ ಕಾರ್ಸೆಟ್ ತಾಯಿಯು ಪೂರ್ವ-ಪ್ರಸೂತಿಯ ಆಕಾರವನ್ನು ಮರಳಿ ಪಡೆಯುವುದನ್ನು ಶೀಘ್ರಗೊಳಿಸಲು ಸಹಕಾರಿಯಾಗುವಂತೆ ಹೆಚ್ಚುವರಿ ಆಧಾರ ಮತ್ತು ಕಂಪ್ರೆಷನ್ ಅನ್ನು ನೀಡುತ್ತದೆ.

ಸಿ-ಸೆಕ್ಷನ್ ಆದ ಬಳಿಕವೂ, ಪೋಸ್ಟ್ ಮಟರ್ನಿಟಿ ಕಾರ್ಸೆಟ್ ಅನ್ನು ಬಳಸುವುದು ಒಳಿತಾಗಿದೆ. ಈ ಸಂದರ್ಭದಲ್ಲಿ, ಕಾರ್ಸೆಟ್ ಕತ್ತರಿಸಿದ ಜಾಗಕ್ಕೆ ಕಂಪ್ರೆಷನ್ ಮತ್ತು ಬೆಂಬಲವನ್ನು ನೀಡುತ್ತದೆ. ಇದರಿಂದಾಗಿ ಆ ಜಾಗದಲ್ಲಿನ ರಕ್ತ ಸಂಚಾರವು ಹೆಚ್ಚಾಗಿ ಶೀಘ್ರ ಚಿಕಿತ್ಸೆ ಉಂಟಾಗುತ್ತದೆ.

ಇದೇ ಕಾರಣಕ್ಕಾಗಿ, ಇಂತಹ ಕಾರ್ಸೆಟ್ ಅಬ್ಡಾಮಿನೋಪ್ಲಾಸ್ಟಿ (ಟಮ್ಮಿ ಟಕ್), ಹಿಸ್ಟೆರೆಕ್ಟಮಿ, ಲೈಪೊಸಕ್ಷನ್ ಮತ್ತು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಂತಹ ಕಿಬ್ಬೊಟ್ಟೆಯ ಜಾಗವನ್ನು ಕತ್ತರಿಸ ಬೇಕಾದಂತಹ ಈ ಎಲ್ಲ ಚಿಕಿತ್ಸೆಗಳ ನಂತರ ಉಪಯುಕ್ತವಾಗಿದೆ.

ಕ್ಲಿಂಗ್ ಈಗ ದೊರೆಯುವ ಅತ್ತ್ಯುತ್ತಮ ಪೋಸ್ಟ್ ಮಟರ್ನಿಟಿ ಕಾರ್ಸೆಟ್ ಏಕಾಗಿದೆ?

ಕ್ಲಿಂಗ್ 25 ಸೆ.ಮಿ ಅಗಲವಿದೆ; ಬೇರೆ ಕಾರ್ಸೆಟ್ಟುಗಳು ಕೇವಲ 20 ಸೆ.ಮಿ ಅಗಲವಿದ್ದು, ಅವು ಕಿಬ್ಬೊಟ್ಟೆಗೆ ಪೂರ್ತಿಯಾದ ಕವರೇಜ್ ನೀಡಲಾರವು.

ಕ್ಲಿಂಗ್ ಸಂಪೂರ್ಣವಾಗಿ ಇಲಾಸ್ಟಿಕ್ ಆಗಿದೆ ಮತ್ತು ಇದು ಇತರೆ ಬಟ್ಟೆ ಹಾಗು ಇಲಾಸ್ಟಿಕ್ ನ ಮಿಶ್ರಣದ ಉತ್ಪನ್ನಗಳ ತುಲನೆಯಲ್ಲಿ ಒಳ್ಳೆಯ ಫಿಟ್ ನೀಡುತ್ತದೆ.

ಕ್ಲಿಂಗ್ ಅತಿ ಶ್ರೇಷ್ಟ ಮಟ್ಟದ, ಆಮದು ಮಾಡಲಾದ ಚರ್ಮ-ಸ್ನೇಹಿ ಮಟೀರಿಯಲುಗಳಿಂದ ಮಾಡಲ್ಪಟ್ಟಿದೆ.

ಕ್ಲಿಂಗ್ ಅದರ ನಮ್ಯತೆಯನ್ನು ಧೀರ್ಘಕಾಲಿಕ ಬಳಕೆಯ ನಂತರವೂ ಉಳಿಸಿಕೊಳ್ಳುತ್ತದೆ.

ಕ್ಲಿಂಗ್ ತೆಳ್ಳಗಿದೆ ಮತ್ತು ಉಡುಪುಗಳ ಒಳಗೆ ಸುಲಭವಾಗಿ ಕೂರುತ್ತದೆ. ಅದರ ಹೆಸರೇ ಹೇಳುವಂತೆ, ಅದು ನಿಮ್ಮ ದೇಹದ ಆಕಾರಕ್ಕೆ ಅಂಟಿಕೊಳ್ಳುತ್ತದೆ ಮತ್ತು ಹೆಚ್ಚು ಕಾಲ ಧರಿಸುವುದಕ್ಕೆ ಆರಾಮದಾಯಕವಾಗಿದೆ.

ಸುಲಭವಾಗಿ ಹೊಂದಿಸಬಲ್ಲ ಮತ್ತು ನೀವು ನಿಮ್ಮ ಸೊಂಟದ ಸುತ್ತ ಕೆಲವು ಇಂಚುಗಳಷ್ಟು ತೂಕ ಇಳಿಸಿದರೂ ಧರಿಸಲು ನೆರವಾಗಬಲ್ಲ ವೆಲ್ಕ್ರೋ ಕ್ಲೋಶರುಗಳನ್ನು ಕ್ಲಿಂಗ್ ಹೊಂದಿದೆ. ಕೆಲವು ಕಾರ್ಸೆಟ್ಟುಗಳು ಬಳಸಲು ಹೆಚ್ಚು ಕಷ್ಟಕರವಾದ ಹುಕ್ಕುಗಳನ್ನು ಅಥವಾ ಬಕಲ್ಲುಗಳನ್ನು ಹೊಂದಿರುತ್ತವೆ.

ಕ್ಲಿಂಗ್ ಗಾಳಿಯಾಡುವ ಇಲಾಸ್ಟಿಕ್ಕಿನಲ್ಲೂ ಲಭ್ಯವಿದ್ದು,ಆದು ಚರ್ಮವನ್ನು ಉಸಿರಾಡಲು ಬಿಡುತ್ತದೆ ಮತ್ತು ಧೀರ್ಘ ಕಾಲದ ಬಳಕೆಗೆ ಸಾಮಾನ್ಯವಾದ ಇಲಾಸ್ಟಿಕ್ ಗಿಂತಲೂ ಹೆಚ್ಚು ಆರಾಮದಾಯಕವಾಗಿದೆ.

Post Maternity Corset – Cling Breath 25

ಅಳತೆ

ಕ್ಲಿಂಗ್ ಎಸ್, ಎಂ, ಎಲ್, ಎಕ್ಸೆಲ್ ಅಳತೆಗಳಲ್ಲಿ ಲಭ್ಯವಿದೆ.

ಕಾರ್ಸೆಟ್ ಕತ್ತರಿಸಲಾದಂತಹ ಜಾಗಕ್ಕೆ ಕಂಪ್ರೆಷನ್ ಗಾಗಿ ಬಿಗಿಯಾಗಿ ಧರಿಸಲ್ಪಡಬೇಕು ಆದರೆ ಧೀರ್ಘಕಾಲದ ಬಳಕೆಗೆ ಆರಾಮದಾಯಕವಾಗಿರಬೇಕು.

ನಿಮ್ಮ ಹೊಕ್ಕಳಿನ ಕೆಳಗೆ ಸೊಂಟದ ಸುತ್ತಳತೆಯನ್ನು ಅಳೆಯಿರಿ ಮತ್ತು ಈ ಕೆಳಗಿನ ಚಾರ್ಟನ್ನು ನೋಡಿ:

Hip circumferenceSizeSmallMediumLargeX-LargeXX-Large
Waist SizeIn cm70-8080-9090-100100-110110-120

ಸಂಬಂಧಪಟ್ಟ ಉತ್ಪನ್ನಗಳು

ನೀವು ಈ ಉತ್ಪನ್ನಗಳನ್ನು ನೋಡಬಯಸಬಹುದು:

  1. ಮಮ್ಮಿಫೀಟ್ ಪ್ರೆಗ್ನೆನ್ಸಿ ಸಾಕ್ಸ್
  2. ನ್ಯೂಮಾಮ್ ಮಾಕ್ಸಿಪ್ಯಾಡ್ಸ್ ಮತ್ತು ಮೆಡಿಪ್ಯಾಡ್ಸ್
  3. ನ್ಯೂಮಾಮ್ ಪ್ಯಾಡ್ ಫಿಕ್ಸೇಟರ್ಸ್