Go to Top

ಸರ್ಜಿಕಲ್ ಟ್ರಸ್

Surgical Truss – Dyna

ಸರ್ಜಿಕಲ್ ಟ್ರಸ್ ನ ಉದ್ದೇಶ (ಹರ್ನಿಯಾ ಬೆಲ್ಟ್ ಎಂತಲೂ ಕರೆಯಲ್ಪಡುತ್ತದೆ)

ಶಸ್ತ್ರಚಿಕಿತ್ಸೆಯು ಬಹುಶಃ ಶಾಶ್ವತ ಪರಿಹಾರವಾದರೂ ಕೂಡ, ಸರ್ಜಿಕಲ್ ಟ್ರಸ್ ಅನ್ನು ಹರ್ನಿಯಾದ ತಾತ್ಕಾಲಿಕ ನಿರ್ವಹಣೆಗಾಗಿ ಬಳಸಲ್ಪಡುತ್ತದೆ.

ಹರ್ನಿಯಾ ಒಳಗಿನ ಅಂಗಾಗಳ ಉಬ್ಬುವಿಕೆಯಾಗಿದೆ ಉ.ದಾ: ಕಿಬ್ಬೊಟ್ಟೆಯ ಗೋಡೆಯಲ್ಲಿನ ದುರ್ಬಲವಾದ ವೊನೆಯ ಮೂಲಕ ಕರುಳು. ಒಂದು ಪಕ್ಷ ಕಿಬ್ಬೊಟ್ಟೆಯ ಗೋಡೆಯು ಸಂಪೂರ್ಣವಾಗಿ ಮುಚ್ಚದಿದ್ದರೆ ಹುಟ್ಟಿನಿಂದಲೇ ಹರ್ನಿಯಾಗಳು ಉಂಟಾಗಬಹುದು. ಅದು ನಂತರದ ಬದುಕಿನಲ್ಲೂ ವಯಸ್ಸಾದಂತೆ ಅಥವಾ ಕಷ್ಟಕರವಾದ ಶಾರೀರಿಕ ಚಟುವಟಿಕೆಯಿಂದ ಉಂಟಾಗಬಹುದು.

ಸಾಮಾನ್ಯ ರೀತಿಯ ಹರ್ನಿಯಾ ಎಂದರೆ “ ಇಂಗಿನ್ವಲ್” ಅಥವಾ ತೊಡೆಸಂದಿನ ಹರ್ನಿಯಾ ಆಗಿದೆ. ಬಗ್ಗುವಾಗ ಅಥವಾ ವಸ್ತುಗಳನ್ನು ಮೇಲೆತ್ತುವಾಗ ಅಥವಾ ಕೆಮ್ಮುವಾಗ ಸಾಮಾನ್ಯವಾಗಿ ಸ್ವಲ್ಪ ನೋವಿರುತ್ತದೆ.

ಸರ್ಜಿಕಲ್ ಟ್ರಸ್ ಅಥವಾ ಹರ್ನಿಯಾ ಬೆಲ್ಟನ್ನು ಬಳಸಬೇಕಾದರೆ, ಹರ್ನಿಯಾ ಕಡಿಮೆಯಾಗಬಲ್ಲದ್ದಾಗಿರಬೇಕು ಅಂದರೆ, ನೀವು ಹರ್ನಿಯಾವನ್ನು ಕಿಬ್ಬೊಟ್ಟೆಗೆ ತಿರುಗಿ ತಳ್ಳಲು ಸಾಧ್ಯವಾಗಬೇಕು. ನಂತರ, ಸರ್ಜಿಕಲ್ ಟ್ರಸ್ಸನ್ನು ಧರಿಸುವುದರಿಂದ ಆ ಜಾಗದ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಹರ್ನಿಯಾ ಮತ್ತೆ ತಿರುಗಿ ಉಂಟಾಗದಂತೆ ತಡೆಯುತ್ತದೆ.

ಕಿಬ್ಬೊಟ್ಟೆಯ ಸ್ನಾಯುಗಳ ದೌರ್ಬಲ್ಯಕ್ಕಿಂತಲೂ ಜೀವಕೋಶಗಳ ( ಫೇಶಿಯಾ ಎಂದು ಕರೆಯಲ್ಪಡುವ) ದೌರ್ಬಲ್ಯದಿಂದ ಹರ್ನಿಯಾಗಳು ಉಂಟಾಗುತ್ತವೆ, ವ್ಯಾಯಾಮಗಳು ಹರ್ನಿಯಾ ಅನ್ನು ಗುಣಪಡಿಸುವುದಿಲ್ಲ ಅಥವಾ ತಡೆಯುವುದಿಲ್ಲ. ವ್ಯಾಯಾಮದಿಂದ ಉಂಟಾಗುವ ಹೆಚ್ಚುವರಿ ಒತ್ತಡವು ಹರ್ನಿಯಾ ವನ್ನು ಹೆಚ್ಚು ಮಾಡಬಹುದಷ್ಟೆ.

ಡೈನಾ ಸರ್ಜಿಕಲ್ ಟ್ರಸ್ಸಿನ ವೈಶಿಷ್ಟ್ಯಗಳು

ಕಡಿಮೆಯಾಗಬಲ್ಲ ತೊಡೆಸಂದಿನ ಹರ್ನಿಯಾದಿಂದ ಡೈನಾ ಸರ್ಜಿಕಲ್ ಟ್ರಸ್ ಮೃದುವಾದ ಉಪಶಮನವನ್ನು ನೀಡುತ್ತದೆ.

ಟ್ರಸ್ ಆಧಾರವು ಎರಡು ಹೊಂದಿಸಬಲ್ಲ ( ಮತ್ತು ತೆಗೆಯಬಲ್ಲ) ಕಂಪ್ರೆಷನ್ ಪ್ಯಾಡುಗಳನ್ನು ಹೊಂದಿದ್ದು, ಅವು ಮೃದುವಾದ ಒತ್ತಡವನ್ನು ನೀಡುತ್ತವೆ ಮತ್ತು ಹರ್ನಿಯಾ ಮೇಲೆ ಕೇಂದ್ರೀಕೃತವಾದ ಕಂಪ್ರೆಷನ್ ಜೊತೆಗೆ ದುರ್ಬಲವಾದ ಸ್ನಾಯುಗಳನ್ನು ಬೆಂಬಲಿಸುತ್ತವೆ. ಇದನ್ನು ಎರಡೂ ಕಡೆಯ ಹರ್ನಿಯಾಗಳಿಗಾಗಿ ಎರಡು ಪ್ಯಾಡುಗಳ ಜೊತೆ ಧರಿಸಬಹುದು ಮತ್ತು ಒಂದು ಕಡೆಯ ಹರ್ನಿಯಾಗಾಗಿ ಒಂದು ಪ್ಯಾಡನ್ನು ತೆಗೆದು ಧರಿಸಬಹುದು.

ಬಳಕೆದಾರರಿಗೆ ಸರಿಹೊಂದಲು ಸುಲಭವಾದ ಪ್ರತ್ಯೇಕ ಹೊಂದಾಣಿಕೆಗಾಗಿ ಮೃದುವಾದ ಉದ್ದನೆಯ ಕಾಲು ಪಟ್ಟಿಯುಳ್ಳ ಹೊಂದಿಸಬಲ್ಲ ಇಲಾಸ್ಟಿಕ್ ಸೊಂಟದ ಪಟ್ಟಿ

ಡೈನಾ ಸರ್ಜಿಕಲ್ ಟ್ರಸ್ ಕಾಣದಂತೆ ಎಲ್ಲ ಉಡುಪುಗಳ ಒಳಗೂ ಧರಿಸಬಹುದು

ಡೈನಾ ಸರ್ಜಿಕಲ್ ಟ್ರಸ್ಸನ್ನು ಧರಿಸುವ ಬಗೆ

  1. ಹಿಂಗಾತವಾಗಿ ಮಲಗಿ ಮತ್ತು ಹರ್ನಿಯಾದ ಊತವನ್ನು ಮೃದುವಾಗಿ  ನಿಮ್ಮ ಬೆರಳುಗಳಿಂದ ಊತವು ಕಿಬ್ಬೊಟ್ಟೆಯ ಗೋಡೆಯೊಳಗೆ ತಿರುಗಿ ಹೋಗುವವರೆಗೂ ಮರ್ದಿಸಿ
  2. ಸರ್ಜಿಕಲ್ ಟ್ರಸ್ಸನ್ನು ನಿಧಾನವಾಗಿ ನಿಮ್ಮ ಕಿಬ್ಬೊಟ್ಟೆಯ ಮೇಲೆ ಇಟ್ಟು, ಹೊಂದಿಸಬಲ್ಲ ಕಂಪ್ರೆಷನ್ ಪ್ಯಾಡನ್ನು ಊತವಿದ್ದ ಜಾಗದ ಮೇಲೆ ಕೂರುವಂತೆ ಹೊಂದಿಸಿ. ಬೇಕಾದಲ್ಲಿ, ಹರ್ನಿಯಾ ಇಲ್ಲದಿರುವ ಕಡೆಯಿಂದ ಕಂಪ್ರೆಷನ್ ಪ್ಯಾಡನ್ನು ತೆಗೆದಿಡಬಹುದು. ಕೆಲವು ವೈದ್ಯರು ಹರ್ನಿಯಾ ಒಂದು ಕಡೆಯಾಗಿದ್ದರೂ (ಏಕಪಕ್ಷೀಯ) ಎರಡೂ ಕಡೆಯಲ್ಲಿ ಕಂಪ್ರೆಷನ್ ಪ್ಯಾಡುಗಳನ್ನು ಬಳಸಲು ಶಿಫಾರಿಸ್ಸು ಮಾಡುತ್ತಾರೆ. ಎರಡೂ ಪ್ಯಾಡುಗಳನ್ನು ಧರಿಸುವುದರಿಂದ ಸಮಾನವಾದ ಒತ್ತಡವು ಉಂಟಾಗಿ, ಆಧಾರವಿಲ್ಲದ ಬದಿಯು ಹೆಚ್ಚುವರಿ ಒತ್ತಡ ಹೊರುವ ಅಪಾಯವನ್ನು ತಪ್ಪಿಸಿದಂತಾಗುತ್ತದೆ.
  3. ಹಿಂಗಾತವಾಗಿ ಮಲಗಿಕೊಂಡು, ನಿಮ್ಮ ದೇಹದ ಹಿಂದೆ ಇಲಾಸ್ಟಿಕ್ ಸೊಂಟದ ಬೆಲ್ಟನ್ನು ಏರಿಸಿಕೊಳ್ಳಿ ಮತ್ತು ಬೆಲ್ಟಿನ ಬಲ ತುದಿಗೆ ವೆಲ್ಕ್ರೋ ಪಟ್ಟಿಯನ್ನು ಕೂಡಿಸಿಕೊಳ್ಳಿ.
  4. ಹಿಂಗಾತವಾಗಿ ಮಲಗಿಕೊಂಡು, ಇಲಾಸ್ಟಿಕ್ ಪಟ್ಟಿಗಳನ್ನು ನಿಮ್ಮ ಕಾಲಿನ ಸುತ್ತ ತನ್ನಿ ಮತ್ತು ಅವುಗಳನ್ನು ಸೊಂಟದ ಪಟ್ಟಿಯ ಮೇಲಿನ ಬಕಲ್ಲುಗಳಿಗೆ ಕಟ್ಟಿರಿ.
  5. ಸರ್ಜಿಕಲ್ ಟ್ರಸ್ ದೇಹಕ್ಕೆ ಸಂಪೂರ್ಣವಾಗಿ ಹೊಂದಿಕೊಂಡು, ಪ್ಯಾಡುಗಳು ಹರ್ನಿಯಾ ಜಾಗದ ಮೇಲೆ ನೇರವಾಗಿ ಹೊಂದಿರುವುದನ್ನು  ಎದ್ದು ನಿಂತು ಖಾತ್ರಿಪಡಿಸಿಕೊಳ್ಳಿ.

ಡೈನಾ ಸರ್ಜಿಕಲ್ ಟ್ರಸ್ಸನ್ನು ತೆಗೆಯುವ ಬಗೆ

  1. ಯಾವುದಾದರೊಂದು ಪಟ್ಟಿಯನ್ನು ಎರಡನೆಯ ಪಟ್ಟಿಯ ನಂತರ ಕಳಚಿ
  2. ಸೊಂಟದ ಪಟ್ಟಿಯನ್ನು ಸಡಿಲಿಸಿ ಮತ್ತು ದೇಹದಿಂದ ಟ್ರಸ್ಸನ್ನು ನಿಧಾನವಾಗಿ ತೆಗೆಯಿರಿ

ತೊಳೆಯಲು ಸೂಚನೆಗಳು

ತೊಳೆಯುವ ಮುನ್ನ ಕಂಪ್ರೆಷನ್ ಪ್ಯಾಡುಗಳನ್ನು ತೆಗೆಯಿರಿ ಮತ್ತು ಅವನ್ನು ಕೊಳೆಯಿಲ್ಲದ ಬಟ್ಟೆಯಿಂದ ಒರೆಸಿ. ಬೆಚ್ಚನೆಯ ನೀರಿನಲ್ಲಿ ಸೌಮ್ಯವಾದ ಸೋಪಿನಿಂದ ಈ ಉತ್ಪನ್ನವನ್ನು ತೊಳೆಯಿರಿ. ಹಿಂಡುವುದನ್ನು ಅಥವಾ ಹಿಸುಕುವುದನ್ನು ಮಾಡದಿರಿ. ಸೂರ್ಯನ ಬೆಳಕಿನಿಂದ ಅಥವಾ ಬಿಸಿಯಿಂದ ದೂರವಾಗಿ ಕೊಠಡಿಯ ತಾಪಮಾನದಲ್ಲಿ ಗಾಳಿಗೆ ಆರಲು ಬಿಡಿ. ಇಸ್ತ್ರಿ ಮಾಡುವುದು ಮತ್ತು ಡ್ರೈ ಕ್ಲೀನ್ ಮಾಡುವುದನ್ನು ತಡೆಯಿರಿ.

ಅಳತೆ

Hip circumferenceSizeSmallMediumLarge
Hip circumferenceIn cm70-8080-9090-100