Go to Top

ಎಂಬೊಲಿಸ್ಮ್ ನಿರೋಧಿ ಕಾಲುಚೀಲ – DVT-18

Anti-embolism Stockings – DVT-18


ಎಂಬೊಲಿಸ್ಮ್ ನಿರೋಧಿ ಕಾಲುಚೀಲಗಳನ್ನು ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಅಥವಾ ಕೂಡಲೇ ಉಂಟಾಗಬಹುದಾದ DVT ಕಡಿಮೆ ಮಾಡಲು ಉಪಯೋಗಿಸಲಾಗುತ್ತದೆ.

DVT ಎಂದರೇನು?

DVT ಎಂದರೆ ಆಳವಾದ ವೀನ್ ಥ್ರಾಂಬಯೊಸಿಸ್ ಎಂದರ್ಥವಾಗುತ್ತದೆ.

ಚರ್ಮದ ಹೊರ ಭಾಗದ ಹತ್ತಿರದಲ್ಲಿ ಬಾಹ್ಯ ನಾಡಿಗಳಿದ್ದು, ಆಳ ನಾಡಿಗಳು ಎಂದರೆ ಅವು ಕಾಲಿನ ಒಳಭಾಗದಲ್ಲಿ ಇರುತ್ತವೆ.

ರಕ್ತದಲ್ಲಿನ ಗಡ್ಡೆಯನ್ನು ಥ್ರಾಂಬೊಸಿಸ್ ಎನ್ನುತ್ತಾರೆ. ಒಮ್ಮೆ ಈ ಗಡ್ಡೆ  ಆದರೆ, ಅದು ನಾಡಿಗಳ ಮೂಲಕ ಹಾಯ್ದು ಶ್ವಾಸ ಕೋಶವನ್ನು ತಲಪಬಹುದು. ಇದರಿಂದಾಗಿ ಮಾರಣಾಂತಿಕ ಎಂಬೊಲಿಸ್ಮ್ ಆಗುವ ಸಾಧ್ಯತೆಗಳಿರುತ್ತವೆ.

ರಕ್ತವು ಸ್ಥಗಿತವಾದರೆ ಗಡ್ಡೆ ಕಟ್ಟುತ್ತದೆ. ಇದು ದೀರ್ಘಕಾಲೀನ ಶಸ್ತ್ರ ಚಿಕಿತ್ಸೆಗಳಲ್ಲಿ (30 ನಿಮಿಷಕ್ಕೂ ಹೆಚ್ಚು ಕಾಲದ) ರೋಗಿಯು ಹೆಚ್ಚು ಕಾಲ ಚಲಿಸದಿದ್ದಾಗ ಸಂಭವಿಸಬಹುದು.

ಎಂಬೊಲಿಸ್ಮ್ ನಿರೋಧಿ ಕಾಲುಚೀಲ ಹೇಗೆ ಉಪಯುಕ್ತವಾಗಿದೆ

ಎಂಬೊಲಿಸ್ಮ್ ನಿರೋಧಿ ಕಾಲುಚೀಲವು ಯಾಂತ್ರಿಕ ಪಂಪಿನಂತೆ ಕೆಲಸ ಮಾಡುತ್ತವೆ ಮತ್ತು ನಾಳಗಳ ಮೂಲಕ ರಕ್ತವು ಮುನ್ನುಗ್ಗುವಂತೆ ಸಹಕರಿಸುತ್ತದೆ. ಇದರಿಂದ ಗಡ್ಡೆ ಕಟ್ಟುವ ಸಾಧ್ಯತೆಯನ್ನು ತಗ್ಗಿಸಬಹುದು.

DVT-18 ಎಂಬೊಲಿಸ್ಮ್ ನಿರೋಧಿ ಕಾಲುಚೀಲವನ್ನು ಯಾಕೆ ಉಪಯೋಗಿಸಬೇಕು?

DVT-18 ಎಂಬೊಲಿಸ್ಮ್ ನಿರೋಧಿ ಕಾಲುಚೀಲವು ಇಂದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಇ ಕಾಲುಚೀಲವಾಗಿದೆ. ಅವುಗಳನ್ನು ಯೂರೋಪಿನ ಗುಣಮಟ್ಟದಲ್ಲಿ ಆಮದುಗೊಳಿಸಲ್ಪಟ್ಟ ಎಳೆಗಳಿಂದ ಯುರೋಪಿಯನ್ ಯಂತ್ರೋಪಕರಣವನ್ನು ಬಳಸಿ ತಯಾರಿಸಲಾಗಿದೆ. DVT-18 ಎಂಬೊಲಿಸ್ಮ್ ನಿರೋಧಿ ಕಾಲುಚೀಲವು ನಿಖರವಾದ ಮತ್ತು ಶ್ರೇಣೀಕೃತ ಒತ್ತಡವನ್ನು ಖಚಿತಪಡಿಸುತ್ತದೆ.

ಅಳತೆಗಳು ಮತ್ತು ವಿನ್ಯಾಸ

ಲಭ್ಯವಿರುವ ವಿನ್ಯಾಸ: ಎಡಿ (ಮೊಣಕಾಲಿನ ಮೇಲೆ), ಎಜಿ (ಮೊಣಕಾಲಿನ ಕೆಳಗೆ)

ಅಳತೆ: ಎಕ್ಸ್ -ಅತಿ ಚಿಕ್ಕ, ಚಿಕ್ಕದು, ಮಧ್ಯಮ, ದೊಡ್ಡ, ಎಕ್ಸ್- ದೊಡ್ಡ, ಎಕ್ಸ್ ಎಕ್ಸ್- ದೊಡ್ಡದು.

ಬಣ್ಣ: ಬಿಳಿ.

ಹೆಬ್ಬೆರಳು ವಿನ್ಯಾಸ: ಹೋಗಬಲ್ಲ ರಂಧ್ರ. ಇದರಿಂದ ವೈದ್ಯರು ಚರ್ಮದ ಬಣ್ಣ ಮತ್ತು ಹೆಬ್ಬೆರಳು-ಉಗುರನ್ನು ಪರೀಕ್ಷಿಸಬಹುದು.

ಒಳಗೇನಿದೆ: 75% ನೈಲಾನ್, 25% ಇಲಾಸ್ಟೇನ್